ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮಾಚರಣೆ

ದಿನಾಂಕ ೨೧/೧೧/೨೦೨೩ ರಂದು ಡಾ.ಬಿ.ಆರ್ .ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯ ವಿಶ್ವ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ|| ಚಂದ್ರಶೇಖರ ಕಂಬಾರ ರವರು ಹಾಗೂ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ|| ಎನ್.ಆರ್. ಭಾನುಮೂರ್ತಿ ರವರು ಹಾಗೂ ವಿಶ್ವ ವಿದ್ಯಾಲಯದ ಕುಲಸಚಿವರಾದ ವಿದ್ಯಾಶ್ರೀ. ಚಂದರಗಿರವರು ಭಾಗವಹಿಸಿದ್ದರು. ಕುಲಸಚಿವರು ವಿದ್ಯಾಶ್ರೀ. ಚಂದರಗಿ ಅತಿಥಿಗಳನ್ನು ಸ್ವಾಗತಿಸಿದರರ. ಕರ್ನಾಟಕ ರಾಜ್ಯ ಉದಯವಾದ ಬಗ್ಗೆ ಹಾಗೂ ಕನ್ನಡ ಭಾಷೆಯ ಅಳಿವು ಉಳಿವಿನ ಬಗ್ಗೆ , ಭಾಷಾ ಜ್ಞಾನಾರ್ಜನೆ , ಭಾಷಾಂತರದ ಸವಾಲು -ಪ್ರಯೋಜನಗಳ ಬಗ್ಗೆ ಡಾ|| ಕಂಬಾರರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕುಲಪತಿಗಳು ಕನ್ನಡ ರಾಜ್ಯೋತ್ಸವ ಆಚರಣೆ ಬಗ್ಗೆ ಹಾಗೂ ವಿದ್ಯಾರ್ಥಿಗಳು ಕನ್ನಡ ಭಾಷೆ ಸಾಹಿತ್ಯ ಓದಲು ಗ್ರಂಥಾಲಯವನ್ನು ವಿನಿಯೋಗಿಸುವ ಹಾಗೂ ಕನ್ನಡ ಸಾಹಿತ್ಯದ ಸದ್ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಕುಲಸಚಿವರು ಹಾಗೂ ಕುಲಪತಿಗಳಿಂದ ಅತಿಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗಾಗಿ ಕನ್ನಡ ಸಾಹಿತ್ಯ ಕನ್ನಡ ನಾಡಿನ ಕುರಿತು ಕ್ವಿಜ್ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಎಲ್ಲಾ ಭೋದಕ ಭೋದಕೇತರ ಸಿಬ್ಬಂದಿವರ್ಗದವರು, ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

Gallery